Friday 14 August 2020

ಸ್ವಾತಂತ್ರೋತ್ಸವದಂದು ಬಿಡುಗಡೆಯಾಗಲಿದೆ ಫರಂಗಿಪೇಟೆ ಹುಡುಗನ ಮಲಯಾಳಂ ಹಾಡು



ಇದೇ 16 ಆಗಸ್ಟ್ 2020 ರಂದು ಮಂಗಳೂರಿನ ಫರಂಗಿಪೇಟೆಯ ತೇವು ನಿವಾಸಿಯಾದ ಫ್ರಾನ್ಸಿಸ್ ಪ್ರೀತಮ್ ಡಿಸೋಜ ಎಂಬ ಯುವಕನ ಮಲಯಾಳಂ ಹಾಡೊಂದು ಬಿಡುಗಡೆಯಾಗಲು ಸಜ್ಜಾಗಿದೆ. ಪ್ರಖ್ಯಾತ ಹಾಡೊಂದರ ಪಿಯಾನೋ ಕವರ್ ವರ್ಷನ್ ಒಂದನ್ನು ಯುವಕರ ಗುಂಪೊಂದು ತಯಾರಿಸಿ ಇದೀಗ ಸುದ್ದಿಯಲ್ಲಿದೆ. ಈ ಹಾಡಿಗೆ ಪ್ರಖ್ಯಾತ ಡಿಜೆ ಲೈನಲ್ ಎಂಬಾತನ ಛಾಯಾಗ್ರಾಹಕ ನಿರ್ದೇಶನ ಈಗಾಗಲೇ ವ್ಯಾಪಕವಾಗಿ ವೈರಲ್ ಆಗತೊಡಗಿದೆ. ಇದೀಗ ಬಂದ ಸುದ್ದಿ ಪ್ರಕಾರ ಡಿಜೆ ಲೈನಲ್ ರವರಿಗೆ ಬೇರೆಬೇರೆ ಕಡೆಗಳಿಂದ ಚಿತ್ರೀಕರಣಕ್ಕೆ ಕರೆಗಳು ಬಂದಿದ್ದು, ಅವರ ಮುಂದಿನ ಚಿತ್ರ ಯಾವುದು ಎಂದು ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ .